ಅಸೈನ್ಮೆಂಟ್- 9
ಮನೆಯಿಂದಲೇ ಕೆಲಸದ ಅಡಿಯಲ್ಲಿ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳುವುದಕ್ಕೆ ಕುರಿತಾಗಿ 400 ಪದಗಳ ಲೇಖನ
ಕೋವಿಡ್ 19 ಪ್ರಪಂಚವನ್ನು ಕಾಡುತ್ತಿರುವ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಪಾಡುವ ಹಿನ್ನೆಲೆಯಲ್ಲಿ ,ನಮ್ಮೆಲ್ಲಾ ಶಿಕ್ಷಕ ಬಾಂಧವರಿಗೆ ಮನೆಯಿಂದಲೇ ಕೆಲಸ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಇದೊಂದು ಸದಾವಕಾಶ ಏಕೆಂದರೆ ಪ್ರೌಢಶಾಲಾ ಶಿಕ್ಷಕರಿಗೆ ಇತ್ತೀಚೆಗೆ ಬಿಡುವಿಲ್ಲದಷ್ಟು ಕೆಲಸ ಕಾರ್ಯಗಳು 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕೆಲಸದಲ್ಲಿ ನಿರತರಾಗಿರುತ್ತಾರೆ. ಶಾಲೆಗಳಲ್ಲಿ ಕ್ಷಣಕ್ಷಣವೂ ಮಹತ್ವದ್ದು.
ಈಪರಿಸ್ಥಿತಿಯಲ್ಲಿ ಶಿಕ್ಷಕರು ಗ್ರಂಥ ಓದುವುದಕ್ಕೆ ಆಗಲಿ ತಂತ್ರಜ್ಞಾನದ ಬಗ್ಗೆ ತಿಳಿಯುವುದಕ್ಕೆ ಆಗಲಿ ಸರಿಯಾದ ರೀತಿಯಲ್ಲಿ ಅಳವಡಿಸಿಕೊಂಡು ಪಾಠ ಬೋಧನೆ ಮಾಡುವುದಕ್ಕಾಗಲಿ ತೊಂದರೆ ಇದೆ ಯಾವುದೇ ಪಡಿಸಿಕೊಳ್ಳುವುದನ್ನು ಕಲಿಯಬಹುದು
ತಂತ್ರಜ್ಞಾನದ ಬಳಕೆಯಿಂದ ಮಕ್ಕಳ ಕಲಿಕೆ ಸುಲಭವಾಗುತ್ತದೆ.
ಶಿಕ್ಷಕರು ತಮ್ಮ ತಮ್ಮ ವಿಷಯಕ್ಕೆ ಸಂಬಂಧಿಸಿದಂತೆ ಪುಸ್ತಕಗಳನ್ನು ಓದಿ ಜ್ಞಾನ ಹೆಚ್ಚಿಸಿಕೊಳ್ಲು ಈ ಒಂದು ಮನೆಯಿಂದಲೇ ಕೆಲಸ ಅಡಿಯಲ್ಲಿ ಸಾಧ್ಯವಾಯಿತು. ಈ ಸಂದರ್ಭದಲ್ಲಿ ನಾನು ಕಾವ್ಯಾರ್ಥ ಚಿಂತನೆ, ಸರ್ವಜ್ಞನ ವಚನಗಳು, ಮಂಕುತಿಮ್ಮನ ಕಗ್ಗ,ಪುಸ್ತಕಗಳನ್ನು ಓದಿದೆ. ವಿಭಾಗದ ಆಯುಕ್ತರು ನೀಡಿದ ಅಸೈನಮೆಂಟ್ಗಳನ್ನು ಪೂರೈಸುವಲ್ಲಿ ಆಡಿಯೋ-ವೀಡಿಯೋಕಲಿಕೋಪಕರಣಗಳನ್ನು ತಯಾರಿಸುವಲ್ಲಿ ,ವಿದ್ಯಾರ್ಥಿಗಳೊಂದಿಗೆ ಸಂಪರ್ಕ, ಶಿಕ್ಷಕರೊಂದಿಗೆ ಸಂವಾದ ಮುಂತಾದ ಮುಂತಾದ ಚಟುವಟಿಕೆಗಳು ಯೋಜನೆಗ ಪೂರಕವಾಗಿದ್ದವು.
ತಂತ್ರಜ್ಞಾನ ಯುಗದಲ್ಲಿ ಮಕ್ಕಳನ್ನು ತಾಂತ್ರಿಕವಾಗಿ ಅಭಿವೃದ್ಧಿ ಪಡಿಸಬೇಕಾದ ಈ ಸಂದರ್ಭದಲ್ಲಿ ಶಿಕ್ಷಕರಿಗೆ ಇದರ ಅವಶ್ಯಕತೆ ತುಂಬಾ ಇದೆ. ಆ ಕಾರಣದಿಂದಾಗಿ ಈ ಒಂದು ಸಂದರ್ಭದಲ್ಲಿ ಶಿಕ್ಷಕರ ವೃತ್ತಿ ನೈಪುಣ್ಯತೆಯ ಅದನ್ನು ತರಗತಿಯಲ್ಲಿ ಅಳವಡಿಸಿಕೊಂಡು ಯಶಸ್ವಿಯಾಗಲು ಇದೊಂದು ಸುಸಂದರ್ಭ ವಾಗಿತ್ತು ಎಂದು ಹೇಳಬಹುದಾಗಿದೆ.
No comments:
Post a Comment