ASSIGNMENT-09 ESSAY ON TO IMPROVEMENT WORK PROFESSION IN WORK FROM HOME. BY ANILKUMAR BIRADAR A.M HINDI

ಅಸೈನ್ ಮೆಂಟ್-09

ಮನೆಯಿಂದಲೇ ಕೆಲಸದಡಿಯಲ್ಲಿ ವೃತ್ತಿ ನೈಪುಣ್ಯತೆಯನ್ನು

ಹೆಚ್ಚಿಸಿಕೊಳ್ಳುವಿಕೆ ಕುರಿತಾಗಿ ೪೦೦ ಪದಗಳ ಲೇಖನ

                              ವಿಷಯ ಶಿಕ್ಷಕರ ಹೆಸರು: ಶ್ರೀ ಅನಿಲ್ ಕುಮಾರ್ ಬಿರಾದಾರ್

                       ಬೋಧಿಸುವ ವಿಷಯ: ತೃತೀಯ ಭಾಷೆ ಹಿಂದಿ


ಮನೆಯಿಂದಲೇ ಕೆಲಸದಡಿಯಲ್ಲಿ ssವೃತ್ತಿ ನೈಪುಣ್ಯತೆಯನ್ನು

ಹೆಚ್ಚಿಸಿಕೊಳ್ಳುವಿಕೆ ಕುರಿತಾಗಿ ೪೦೦ ಪದಗಳ ಲೇಖನ

Ø  ಶಿಕ್ಷಕರು  ವರ್ಕ್ ಫ್ರಂ ಹೋಮ್ ಸಂಧರ್ಭದಲ್ಲಿ ಅನೇಕ ಪೌರಾಣಿಕ ಧಾರಾವಾಹಿಗಳನ್ನು ವೀಕ್ಷಿಸುವ ಮೂಲಕ ತಮ್ಮ ಭಾಷಾಜ್ಞಾನವನ್ನು ಹೆಚ್ಚಿಸಿಕೊಂಡಿದ್ದಾರೆ.

 

Ø  ಪರಿಣಾಮಕಾರಿಯಾಗಿ ಪಾಠ ಬೋಧನೆ ಮಾಡಲು ಶಿಕ್ಷಕರು ಅನೇಕ ಪಾಠಗಳ ಪಿಪಿಟಿ ಗಳನ್ನು ರಚಿಸಿಕೊಳ್ಳಲು ಅವಕಾಶ ಸಿಕ್ಕಿದೆ.

 

Ø  ಶಿಕ್ಷಕರು ಅನೇಕ ಕಥೆ ಕಾದಂಬರಿಗಳನ್ನು ಓದಿ ತಮ್ಮ ಜ್ಞಾನಭಂಡಾರವನ್ನು ಹೆಚ್ಚಿಸಿಕೊಳ್ಳುವ ಸದಾವಕಾಶ ಒದಗಿಬಂದಿದೆ.

 

Ø  ಶಿಕ್ಷಕರಿಗೆ ಓದುವ ಹವ್ಯಾಸ ಹೆಚ್ಚಿಸಿದೆ.

 

Ø  ವರ್ಕ್ ಫ್ರಮ್ ಹೋಮ್ ಸಮಯದಲ್ಲಿ ಶಿಕ್ಷಕರು ತಮ್ಮ ಪಾಠಗಳ ಪಾಠ ಯೋಜನೆಗಳು ತಂತ್ರಜ್ಞಾನವನ್ನು ಬಳಸಿಕೊಂಡು ತಯಾರಿಸಿಕೊಳ್ಳಲು ಒಳ್ಳೆಯ ಅವಕಾಶ ಸಿಕ್ಕಿದೆ.

Ø   

Ø  ವರ್ಕ್ ಫ್ರಮ್ ಹೋಮ್ ನೀಡಿರುವುದರಿಂದ ಪೌರಾಣಿಕ ಧಾರವಾಹಿಗಳಾದ ರಾಮಾಯಣ-ಮಹಾಭಾರತ ಹಾವು ಶ್ರೀಕೃಷ್ಣ ನೋಡುವುದರ ಮೂಲಕ ಶಿಕ್ಷಕರಿಗೆ ನೈತಿಕ ಜ್ಞಾನ ಹೆಚ್ಚಾಗಿದೆ.

 

Ø  ವರ್ಕ್ ಫ್ರಮ್ ಹೋಮ್ ನೀಡಿರುವುದರಿಂದ ಶಿಕ್ಷಕರು ತಮ್ಮ ಪರಿವಾರದ ಜೊತೆ ಹೆಚ್ಚು ಸಮಯ ಕಳೆಯುವುದಕ್ಕೆ ಸದಾವಕಾಶ ಸಿಕ್ಕಿದೆ.

 

Ø  ವರ್ಕ್ ಪ್ರನ್ ಹೋಂ ನೀಡಿರುವುದಕ್ಕೆ ಅನೇಕ ಅಡಿಗೆ ಪಾಕಗಳನ್ನು ತಯಾರಿಸಿಕೊಳ್ಳುವ ಸದಾವಕಾಶ ಸಿಕ್ಕಿದೆ.

 

Ø  ಮಕ್ಕಳ ಜೊತೆ ಮನೆಯಲ್ಲಿ ಕುಳಿತುಕೊಂಡು ಸಾಂಪ್ರದಾಯಿಕ ಹೊಸ ಹೊಸ ಆಟಗಳನ್ನು ಆಡುವ ಸದಾವಕಾಶ ಸಿಕ್ಕಿದೆ.

 

Ø  ಬರೆಯುವ ಹವ್ಯಾಸ ಇರುವ ಶಿಕ್ಷಕರಿಗೆ ಅನೇಕ ನಿರ್ಬಂಧಗಳನ್ನು ರಚನೆ ಮಾಡುವ ಅವಕಾಶ ಸಿಕ್ಕಿದೆ.

 

Ø  ವರ್ಕ್ ಫ್ರಮ್ ಹೋಮೆ ಇರುವದರಿಂದ ಅನೇಕ ಶಿಕ್ಷಕರಿಗೆ ಕಂಪ್ಯೂಟರ್ ಜ್ಞಾನ ಇಂಟರ್ನೆಟ್ ಬಳಸುವುದು ಹೇಗೆ ಜೊತೆಯಲ್ಲಿ ಕಂಪ್ಯೂಟರ್ ಮೂಲಕ ವಿಷಯಕ್ಕೆ ಸಂಬಂಧಿಸಿದ ಕಲಿಕೋಪಕರಣಗಳು ಮಾಡಿಕೊಳ್ಳುವ ಅವಕಾಶ ಸಿಕ್ಕಿದೆ.

 

Ø  ಶಿಕ್ಷಕರಿಗೆ ವರ್ಕ್ ಫ್ರಮ್ ಹೋಮ್ ನೀಡುವುದರಿಂದ ಕುಬೇರ್ ಸಂದರ್ಭದಲ್ಲಿ ಅವರ ಪರಿವಾರದವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವಾಗಿದೆ.

 

Ø  ಶಿಕ್ಷಕರು ಮನೆಯಿಂದಲೇ ವಿದ್ಯಾರ್ಥಿಗಳಿಗೆ ಅನೇಕ ಆಪ್ ಗಳ ಮೂಲಕ ಪಾಠ ಬೋಧನೆ ಮಾಡಲು ಅವಕಾಶ ಸಿಕ್ಕಿದೆ.

 

Ø  ಮನೆಯಿಂದಲೇ ತಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಫೋನ್ ಕಾಲ್ ಮೂಲಕ ಚಂದನ ವಾಹಿನಿಯಲ್ಲಿ ಮೂಡಿ ಬರುವ ಸೇತುಬಂಧ ಕಾರ್ಯಕ್ರಮ ವೀಕ್ಷಿಸಲು ತಿಳಿಸಲಾಯಿತು.

 

Ø  ಶಿಕ್ಷಕರು ವಿವಿಧ ಮೊಬೈಲ್ ಆಪ್ ಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾದ ಬೋಧನೆಯನ್ನು ಮಾಡಲು ಅವಕಾಶ ಸಿಕ್ಕಿದೆ.

 

Ø  ಶಿಕ್ಷಕರು ಮನೆಯಿಂದಲೇ ವಾಟ್ಸಪ್ ಗ್ರೂಪ್ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಹೋಂವರ್ಕ್ ನೀಡುವ ಕೆಲಸ ಮಾಡುತ್ತಿದ್ದಾರೆ.

 

Ø  ಶಿಕ್ಷಕರಿಗೆ ವರ್ಕ್ ಫ್ರಮ್ ಹೋಮ್ ನೀಡಿರುವುದರಿಂದ ಫೇಸ್ಬುಕ್ ಲೈವ್ ಹಾಗೂ ಇತರೆ ಗಳ ಮೂಲಕ ಮೂಡಿಬರುವ ಪ್ರಸಿದ್ಧ ಭಾಷಣಕಾರರ ಉಪನ್ಯಾಸಗಳನ್ನು ಕೇಳಿ ತಮ್ಮ ಜ್ಞಾನಾರ್ಜನೆಯನ್ನು ಮಾಡಿಕೊಂಡಿದ್ದಾರೆ.

 

Ø  ಶಿಕ್ಷಕರು ಮನೆಯಿಂದಲೇ ತನ್ನ ಸಹೋದ್ಯೋಗಿಗಳ ಜೊತೆ ಅನೇಕ ಪಠ್ಯ ವಿಷಯಗಳ ಬಗ್ಗೆ ಚರ್ಚಿಸಿ ತಮ್ಮ ಸಂದೇಹಗಳನ್ನು ನಿವಾರಿಸಿಕೊಳ್ಳಲು ಸದಾವಕಾಶ ಸಿಕ್ಕಿದೆ.

 

Ø  ಆನ್ಲೈನ್ ತರಗತಿಯ ಮೂಲಕ ವಿಷಯದಲ್ಲಿ ಪರಿಣಿತರು ಶಿಕ್ಷಕರು ಪಾಠ ಬೋಧನೆ ಮಾಡುವುದರಿಂದ ಉಳಿದ ಶಿಕ್ಷಕರಿಗೆ ತಮ್ಮಲ್ಲಿ  ಇರುವ ನ್ಯೂನತೆಗಳನ್ನು ಅಳಿಸಿ ತಮ್ಮನ್ನು ಬದಲಾಯಿಸಿಕೊಳ್ಳುವ ಸದಾವಕಾಶ ಸಿಕ್ಕಿದೆ.

 

Ø  ಶಿಕ್ಷಕರಿಗೆ ವರ್ಕ್ ಫ್ರಮ್ ಹೋಮ್ ನೀಡಿರುವುದರಿಂದ ತಮಗೆ ಪಾಠ ಬೋಧಿಸುವ ಆಕರ್ಷಕ ಪಿಪಿಟಿ ಗಳನ್ನು ರಚಿಸಿಕೊಳ್ಳುವ ಅವಕಾಶ ಸಿಕ್ಕಿದೆ.

 

Ø  ಶಿಕ್ಷಕರಿಗೆ ಹೆಚ್ಚು ಸಮಯ ಮನೆಯಲ್ಲಿ ಇರಲು ಸಿಕ್ಕಿರುವುದರಿಂದ ಶಿಕ್ಷಕರು ಇಡೀ ವರ್ಷದ ಎಲ್ಲಾ ಪಾಠಗಳು ಆಕರ್ಷಕ ಆಡಿಯೋ-ವಿಡಿಯೋ ಹಾಗೂ ಪಿಪಿಟಿ ಗಳನ್ನು ರಚಿಸಿಕೊಳ್ಳುವ ಅವಕಾಶ ಸಿಕ್ಕಿದೆ.

 

ಉಪಸಂಹಾರ:

 

Ø  ಒಟ್ಟಾರೆಯಾಗಿ ವರ್ಕ್ ಫ್ರಂ ಹೋಮ್ ನೀಡುವುದರಿಂದ ಶಿಕ್ಷಕರಿಗೆ ವೈಯಕ್ತಿಕವಾಗಿ ಹಾಗೂ ಶೈಕ್ಷಣಿಕವಾಗಿ ಅನೇಕ ಉಪಯೋಗವಾಗಿದೆ ಶಿಕ್ಷಕರು ಮನೆಯಲ್ಲಿದ್ದು ತಮ್ಮನ್ನು ತಾವು ಅಪ್ಡೇಟ್ ಮಾಡಿಕೊಂಡಿದ್ದಾರೆ ಹಾಗಾಗಿ ಇದು ತುಂಬಾ ಉಪಯೋಗಕರವಾಗಿದೆ

 

 

 ನಿರ್ವಹಿಸಿದ ಶಿಕ್ಷಕರ ರುಜು                                           ಪರಿಶೀಲಿಸಿದ ಉಪ-ಪ್ರಾಚಾರ್ಯರ ರುಜು                                                                                                                                 


No comments:

Post a Comment